ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ಆರ್ನಾಲ್ಡ್ ಟಾಯೆನ್ಬೀ ಅವರ ಎರಡು ಸುಂದರ ಅಣಿಮುತ್ತುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. ಅವರಿಂದು ನಮ್ಮೊಡನಿಲ್ಲ. ಅವರಿದನ್ನು ನುಡಿದು ದಶಕಗಳೇ ಸಂದಿವೆ. "ಅಮೆರಿಕ ದೇಶ ಕೋಣೆಯೊಳಗಿರುವ ಒಂದು ದೊಡ್ಡ ನಾಯಿಯಂತೆ. ಪ್ರತಿಬಾರಿ ಅದು ಬಾಲ ಅಲ್ಲಾಡಿಸಿದಾಗಲೂ ಅಲ್ಲಿರುವ ಒಂದಲ್ಲ ಒಂದು ವಸ್ತು ಕೆಳಗೆ ಬೀಳುತ್ತದೆ." "ಈಗಾಗಲೇ ನಿಚ್ಚಳವಾಗಿರುವಂತೆ, ಮನುಕುಲ ತನ್ನನ್ನು ತಾನು ನಾಶಗೊಳಿಸುವುದನ್ನು ತಪ್ಪಿಸಬೇಕಿದ್ದಲ್ಲಿ, ಪಾಶ್ಚಿಮಾತ್ಯ ದೇಶಗಳು ಮುನ್ನುಡಿ ಬರೆದ (ಆ) ಅಧ್ಯಾಯಕ್ಕೆ ಭರತ ವರ್ಷ ಅಂತ್ಯ ಹಾಡಬೇಕು....ಸನಾತನ ಧರ್ಮವಷ್ಟೇ ಅಪಾಯಕ್ಕೆ ಸಿಲುಕಿರುವ ಮನುಕುಲದ ಇತಿಹಾಸದ ದಿಕ್ಕನ್ನು ಬದಲಿಸಬಹುದು. ಇಡೀ ವಿಶ್ವವನ್ನು ಒಗ್ಗೂಡಿಸಬಲ್ಲ ಶಕ್ತಿ ಸಾಮರ್ಥ್ಯ ಅದಕ್ಕಿದೆ." ಸನಾತನ ಧರ್ಮದಿಂದ ಬಳುವಳಿಯಾಗಿ ಬಂದ ಸಂಪ್ರದಾಯದಂತೆ ನಡೆಯುವ ವಿವಾಹ ಮಹೋತ್ಸವದಲ್ಲಿ ಸಪ್ತಪದಿ ಬಹುಮುಖ್ಯ ಅಂಗ. ವಧೂ-ವರರಿಬ್ಬರೂ ಅಗ್ನಿದೇವರ ಸಮಕ್ಷಮದಲ್ಲಿ ವಿಧಿವತ್ತಾಗಿ ವಿವಾಹದೀಕ್ಷೆಯನ್ನು ಸ್ವೀಕರಿಸುವ ಸಂದರ್ಭವದು. ಪ್ರಮಾಣವಚನ ಸಂಸ್ಕೃತದಲ್ಲಿರುವುದರಿಂದ ಅದರ ಸಾರವನ್ನು ಬಿಂಬಿಸುವ "ಕಲ್ಲಿರಲಿ, ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ, ಹೊಸಬಾಳಿನ ಹಾದಿಯಲ್ಲಿ ಜತೆಗೂಡಿ ನಾ ಬರುವೆ" ಎಂಬ ಅಣ್ಣಾವ್ರ "ನ್ಯಾಯವೇ ದೇವರು" ಚಿತ್ರದ ಜನಪ್ರಿಯ ಗೀತೆಯ ಸಾಲುಗಳನ್ನು ಉದ್ಧರಿಸಬಹುದು. (ಬಂಡೀಪು...
ತಿನ್ನಿರಿ, ತಿನಿಸಿರಿ